ಜೂಡಿ ನ್ಯೂಸ್ :
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 16.01.2026.ರಂದು ಕಾರಟಗಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಸಂಜೆ ನಡೆದ ಸೌಹಾರ್ದ ಜಾನಪದ ಸಂಭ್ರಮ ಭಾವೈಕ್ಯತೆಯ ಹಾಡು ಹಾಡೋಣ ಬಾರ ಬಾರಾ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ರಾಜ್ಯ ಜಾನಪದ ಯುವ ಸಿರಿ ಪ್ರಶಸ್ತಿ ಪುರಸ್ಕೃತ ಯುವ ಜಾನಪದ ಕಲಾವಿದ ನಾಗರಾಜ್ ಗಂಟಿ, ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ಕಿಂಡ್ರಿ ಲಕ್ಷ್ಮಿಪತಿ ಓಬಳಾಪುರ ಸುಡುಗಾಡು ಸಿದ್ದ ಜಾನಪದ ಕೈಚಳಕ ಕಲಾವಿದರು ವೇದಿಕೆಯನ್ನು ಅಲಂಕರಿಸಿ ಜ್ಯಾ ಜ್ಯಾ ಜ್ಯಾ ಓದಿಸು ಮಂತ್ರಿಸು ಮಾಯ ಮಾಡು ಸಿದ್ದಾರಾಟ ಶಿವನಾಟ ಮರದಲ್ಲಿ ಮಂಗನಾಟ ಎಂಬ ವಿಶಿಷ್ಟ ಶಬ್ದದ ಮೂಲಕ ಜಾನಪದ ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ಆರಂಭ ಮಾಡಿದರು.
ಅಗಾಟ ಭೋಗಾಟ ಒಂದು ದಿನ ಕುಣಿಯಾಕ ಲಗಾಟ ಕುಣಿಯಾಕ ಲಗಾಟ ಹೊಡೆಯೋದ್ರೊಳಗೆ ಜೀವನದಾಗ ಒಮ್ಮೆ ಸಿದ್ದರಾಟ ನೋಡಬೇಕಂತೆ ಸಿದ್ದರಾಟ ನೋಡಬೇಕಂತೆ ಎಂದು ನಾಗರಾಜ್ ಗಂಟಿ ಮಾತನಾಡುತ್ತಾ, ನಂತರ ಕಿಂಡ್ರಿ ಲಕ್ಷ್ಮಿಪತಿಯವರು ಪಾತಾಳಗೊಂಬೆ ಬೇತಾಳಗೊಂಬೆ ಬೆದರುಗೊಂಬೆ ಎನ್ನುವ ಗೊಂಬೆಯ ಮೂಲಕ ಚಮತ್ಕಾರ ಮಾಡಿ ಸಾಧು ಶರಣರ ಸಂತ ಮಹಾಂತರಾ ತತ್ವ ಜ್ಞಾನವನ್ನು ಬೋಧಿಸುತ್ತಾ ಬಸವಣ್ಣ ಲಿಂಗ ವಿಭೂತಿ ನಿಂಬೆಹಣ್ಣು ತಮ್ಮ ಚಮತ್ಕಾರದಿಂದ ತೆಗೆದು ಕ್ಷಣಮಾತ್ರದಲ್ಲಿ ಹೊಸ ವಸ್ತುಗಳನ್ನು ಸೃಷ್ಟಿಸಿ ವಿಶಿಷ್ಟ ಧ್ವನಿಯ ಮೂಲಕ ತತ್ವ ಬರೀತ ಜ್ಞಾನ ಸಹಿತ ವಿಶಿಷ್ಟ ಜಾನಪದ ಸುಡುಗಾಡು ಸಿದ್ಧ ಕಲೆ ಪ್ರದರ್ಶನವು ನೆರೆದಿದ್ದ ಜನಸ್ತೋಮಕ್ಕೆ ಮನರಂಜನೆಯ ಜೊತೆಗೆ ತತ್ವವನ್ನು ಬಿತ್ತಿದರು..
ಸೌಹಾರ್ದ ಜಾನಪದ ಸಂಭ್ರಮದ ಕಾರ್ಯಕ್ರಮಕ್ಕೆ ಮೆರುಗು ನೀಡಿ ಯಶಸ್ವಿಯಾಗಿ ಅದ್ಭುತವಾಗಿ ಕಲಾ ಪ್ರದರ್ಶನವನ್ನು ನೀಡಿದ ಸುಡುಗಾಡು ಸಿದ್ದ ಜಾನಪದ ಕಲಾವಿದರಿಗೆ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಸರ್ ರವರು ಕಲಾವಿದರಿಗೆ ಪ್ರಮಾಣ ಪತ್ರವನ್ನು ನೀಡಿ ಅಭಿನಂದರಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯರಾದ ಮೆಹಬೂಬ್ ಕಿಲ್ಲೆದಾರ್, ಹಾಗೂ ಡಾ. ಜೀವನ್ಸಾಬ್ ವಾಲಿಕಾರ್ ಬಿನ್ನಾಳ್, ಅಕಾಡೆಮಿಯ ಇತರೆ ಸದಸ್ಯರು ಹಾಗೂ ನಾಡಿನ ವಿವಿಧ ಜನಪದ ಕಲಾತಂಡಗಳು, ಕಾರಟಗಿಯ ಸಮಸ್ತ ನಾಗರಿಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ