January 31, 2026

ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಗೆ ಒಲಿದ ರಾಜ್ಯಮಟ್ಟದ ಅತ್ಯುತ್ತಮ ಪುಸ್ತಕ ಪ್ರಶಸ್ತಿ..

ಜೂಡಿ ನ್ಯೂಸ್ :

ಬೆಳಗಾವಿಯ ಅಜೂರು ಪ್ರತಿಷ್ಠಾನ ಹಾರೂಗೇರಿ ರವರು ಕೊಡ ಮಾಡುವ ರಾಜ್ಯಮಟ್ಟದ 2025ರ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪನವರಾದ ದಮ್ಮೂರು ಮಲ್ಲಿಕಾರ್ಜುನ ರವರ “ಕತ್ತಲಲ್ಲಿ ಹಚ್ಚಿಟ್ಟ ದೀಪ ಎಂಬ ಪುಸ್ತಕ” ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹಿರಿಯ ಸಾಹಿತಿ ಸೋ, ದಾ, ವಿರೂಪಾಕ್ಷಗೌಡ, “ಇದು ನಮಗೇಕೋ” ಎನ್ನುವ ಪುಸ್ತಕ ಕೂಡ್ಲಿಗಿ ತಾಲೂಕಿನ ಗೆದ್ದಲಗಟ್ಟಿ ಗ್ರಾಮದ ಶಿಕ್ಷಕರಾದ ಶ್ರೀ ಶೇಖರಯ್ಯ ಟಿ ಹೆಚ್ ಎಂ “ಮಾತನಾಡದ ಚುಕ್ಕಿ” ಎಂಬ ಪುಸ್ತಕಗಳು 

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ 15-12026.ರಂದು ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 2026 ನೇ ಸಾಲಿನ ಅಜೂರ ಪ್ರತಿಷ್ಠಾನ ರಾಜ್ಯ ಮಟ್ಟದ ಕರ್ನಾಟಕ ರಾಜ್ಯ 2025ರ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ. ಆಯ್ಕೆಯಾಗಿ 2025- 26ರ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದಮ್ಮೂರು ಮಲ್ಲಿಕಾರ್ಜುನ, ಶ್ರೀ ಸೋ. ದಾ, ವಿರೂಪಾಕ್ಷಗೌಡ, ಶ್ರೀ ಶೇಖರಯ್ಯ ಟಿಹೆಚ್ ಇವರ ಅನನ್ಯ ಸಾಹಿತ್ಯ ಸಾಧನೆಗೆ ಅಖಂಡ ಬಳ್ಳಾರಿ ವಿಜಯನಗರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ: ನಿಷ್ಟಿ ರುದ್ರಪ್ಪನವರು. ಹಾಗೂ ವಿಜಯನಗರ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ: ಕೆ ರವೀಂದ್ರನಾಥ್ ಸರ್. ಕಸಾಪ ತಾಲೂಕು ಅಧ್ಯಕ್ಷರು ಡಾ: ಗುಂಡಿ ಮಾರುತಿ, ಸರ್ವ ಪದಾಧಿಕಾರಿಗಳು ಹಾಗೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಲಕ್ಷ್ಮೀ, ಸರ್ವ ಪದಾಧಿಕಾರಿಗಳು ಕದಳಿ ಮಹಿಳಾ ವೇದಿಕೆಯ ಡಾ: ಅಕ್ಕಮಹಾದೇವಿ, ಹೊಸಪೇಟೆಯ ಬಸವ ಬಳಗದ ಅಧ್ಯಕ್ಷರಾದ ಬಸವಕಿರಣ. ವಿಜಯನಗರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಮಾವಿನಹಳ್ಳಿ ಬಸವರಾಜ್ , ಡಾ: ಟಿ ಎಚ್ ಬಸವರಾಜ್, ಡಾ: ಮಹಾಬಲೇಶ್ವರ ರೆಡ್ಡಿ. ಡಾ: ಸೋಲೋಚನ, ಡಾ: ದಯಾನಂದ್ ಕಿನ್ನಾಳ, ನೂರ್ ಜಹಾನ್, ಅಂಜಲಿ ಬೆಳಗಲ್, ಏಚ್ ಎಂ ಜಂಭುನಾಥ್ ರಂಗಕರ್ಮಿ ಉಮಾಮಹೇಶ್ವರ, ವಿಶಾಲ್ ಮ್ಯಾಸರ್, ಚಂದ್ರಶೇಖರ ರೋಣದ ಮಠ, ಎ ಕರುಣಾನಿದಿ ಯಮನಪ್ಪ, ಕೆ ಎಂ ಬಸವರಾಜ್, ನಾಗರಾಜ ಗಂಟಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲಾ ವಿವಿಧ ಸಂಘಟನೆಯ ಸಂಘಟಕರು, ಸಾಹಿತಿಗಳು ಕಲಾವಿದರು,ಸಾಹಿತ್ಯ ಪ್ರೇಮಿಗಳು, ಶಿಕ್ಷಣ ಪ್ರೇಮಿಗಳು ವಿಶೇಷ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾದ ಸಾಧಕರಿಗೆ ಪ್ರಕಟಣೆ ಮೂಲಕ ಅಭಿನಂದನೆ ಸಲ್ಲಿಸಿದರು…