January 31, 2026

ಹಂಪಾಪಟ್ಟಣ : ವಾಸವಿ ಅಗ್ನಿ ಪ್ರವೇಶ ಕಾರ್ಯಕ್ರಮ ಸಂಪನ್ನ

ಜೂಡಿ ನ್ಯೂಸ್ :

 ಇಂದು  20/01/2026 ರಂದು ವಾಸವಿ ಅಗ್ನಿಪ್ರವೇಶ ಕಾರ್ಯಕ್ರಮವು ಮಧುಸೂದನ ಜೋಶಿ ಇವರ ನೇತೃತ್ವದಲ್ಲಿ ಹಂಪಾಪಟ್ಟಣ ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಜರಗಿತು ಮುಂಜಾನೆಯ ಸಮಯದಲ್ಲಿ ವಿಘ್ನ ನಿವಾರಕ  ವಿಘ್ನೇಶ್ವರನಿಗೆ ಹಾಗೂ ನಗರೇಶ್ವರನಿಗೆ ಮತ್ತು ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ಅಭಿಷೇಕ ಕಾರ್ಯಕ್ರಮ ನೆರವೇರಿಸಿದ್ದು ಹಂಪಾಪಟ್ಟಣ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಆರ್ಯವೈಶ್ಯ ಬಂಧು ಬಾಂಧವರೆಲ್ಲರೂ ಅಗ್ನಿ ಪ್ರವೇಶಕ್ಕೆ ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡರು.*

*ವಾಸವಿಅಗ್ನಿ ಪ್ರವೇಶದ ಹೋಮ ಕಾರ್ಯಕ್ರಮಕ್ಕೆ ಕಾರ್ಯನಿರ್ವಾಹಕ ಅಭಿಯಂತರರು( ಇಂಜಿನಿಯರ್) ಆದ ಹಾಗೂ ವಾಸವಿ ವಾಣಿಜ್ಯ ಮಳಿಗೆಗೆ* *ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಶ್ರೀಯುತ ” ಎ, ರಘು ನಂದನ್ ಸರ್ ಶ್ರೀಮತಿ ಶ್ರಾವಣಿ” ಇವರು ಅಗ್ನಿ ಪ್ರವೇಶದ ಪೂಜೆ ನೆರವೇರಿಸಿದರು.

 *ದಯಾಮಯಿಯಾದ ಕನ್ನಿಕಾ ಪರಮೇಶ್ವರಿ ತಾಯಿಯವರು ಇವರ ಕುಟುಂಬಕ್ಕೆ ಸಕಲ ಸಂಪದವನ್ನು ಕೊಟ್ಟು ಆಶೀರ್ವದಿಸಲಿ ಎಂದು ಪ್ರಾರ್ಥನೆ ಮಾಡಿಕೊಂಡೆವು.*

*ಹಾಗೆ “ವಾಸವಿ ಅಗ್ನಿ ಪ್ರವೇಶ”ದ ಕಾರ್ಯಕ್ರಮಕ್ಕೆ ಪ್ರತಿ ವರ್ಷವೂ ಸಹಿತ ಅಗ್ನಿ ಪ್ರವೇಶಕ್ಕೆ ಬರುವ ಭಕ್ತಾದಿಗಳಿಗೆ ನಿಸ್ವಾರ್ಥವಾಗಿ ಪ್ರಸಾದದ ವ್ಯವಸ್ಥೆ( ಊಟ) ಸಲ್ಲಿಸುತ್ತಿರುವ “ಕಾರಂ ಕುಟುಂಬದ ಶ್ರೀಮತಿ “ಸಂಗೀತ ಮನೋಹರ ಶಟ್ರು” ಇವರು ತಮ್ಮ ಮನೆಯಲ್ಲಿಯೇ “ಊಟ”ವನ್ನು ತಯಾರಿ ಮಾಡಿಕೊಂಡು ಹಂಪಾಪಟ್ಟಣಕ್ಕೆ ತೆಗೆದುಕೊಂಡು ಬಂದು ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ ಇವರ ಕುಟುಂಬಕ್ಕೂ ಸಹಿತ ಲೋಕ ಮಾತೆಯಾದ ಕನ್ನಿಕಾಪರಮೇಶ್ವರಿ ಅಮ್ಮನವರು ಸಕಲ ಸಂಪದವನ್ನು ಕೊಟ್ಟು ಕರುಣಿಸಲೆಂದು ಪುರೋಹಿತರು ಆಶೀರ್ವದಿಸಿದರು.*

*ಆರ್ಯವೈಶ್ಯ ಸಂಘದ ಕಾರ್ಯದರ್ಶಿಯಾದ ಶ್ರೀನಿವಾಸ ಇವರು ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಉದಾರ ಮನಸ್ಸಿನ ದಾನಿಗಳು ವಿರಳವಾದ ದಿನಮಾನಗಳಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಶ್ರೀಮತಿ ಸಂಗೀತ ಮನೋಹರ ಅವರು ಹೇಳಿದರು.

ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಪಿ ಶ್ರೀನಾಥ್ ಅವರು ಮಾತನಾಡಿ ಈ ಎರಡು ದಂಪತಿಗಳ ಸೇವೆ ಅಪಾರ ಅನನ್ಯ ಎಂದು ಹರ್ಷವನ್ನು ವ್ಯಕ್ತಪಡಿಸಿದರು ಹಾಗೆ ಶ್ರೀಮತಿ ಶ್ರಾವಣಿ ರಘುನಂದನ್ ಕುಟುಂಬದವರ ಜೊತೆ ಹಾಗೂ ಶ್ರೀಮತಿ ಸಂಗೀತ ಮನೋಹರ್ ದಂಪತಿಗಳಿಗೆ ಪುರುಷರು ಹಾಗೂ ಮಹಿಳಾ ಸಂಘದವರು ಸೇರಿ ಗೌರವ ಪೂರ್ವಕವಾಗಿ ಮಾಲಾರ್ಪಣೆ ಮಾಡಿದರು.*

*ವಾಸವಿ ಅಗ್ನಿ ಪ್ರವೇಶ ಕಾರ್ಯಕ್ರಮಕ್ಕೆ ಆರ್ಯವೈಶ್ಯ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಸುತ್ತಮುತ್ತಲಿನ ಆರ್ಯವೈಶ್ಯ ಕುಟುಂಬದವರೆಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿದ ನಂತರ ಪ್ರಸಾದವನ್ನು ಸ್ವೀಕರಿಸಿದೆವು ಎಂದು ಶ್ರೀನಿವಾಸ ಅವರು ತಿಳಿಸಿದರು.*