January 31, 2026

ಜ.25, ಶ್ರೀ ಮಾತಾ ಸೇವಾ ಟ್ರಸ್ಟ್ ನ 3ನೇ ವಾರ್ಷಿಕೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ 

ಜೂಡಿ ನ್ಯೂಸ್ :

ಹಗರಿಬೊಮ್ಮನಹಳ್ಳಿ ತಾಲೂಕು ಹಂಪಾಪಟ್ಟಣ ಗ್ರಾಮದಲ್ಲಿ ಇದೇ ಭಾನುವಾರ ದಿನಾಂಕ 25,01,2026 ರಂದು ಶ್ರೀ ನಗರೇಶ್ವರ ದೇವಸ್ಥಾನ ಮುಖ್ಯರಸ್ತೆ ಹಂಪಾಪಟ್ಟಣ ಗ್ರಾಮದಲ್ಲಿ ಶ್ರೀ ಮಾತಾ ಸೇವಾ ಟ್ರಸ್ಟ್( ರಿ)” ವತಿಯಿಂದ “ಮೂರನೇ ವರ್ಷದ” ವಾರ್ಷಿಕೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಜನ ಮನ ಗೆದ್ದಿರುವ ಸೇವಾ ಸಾಧಕರಿಗೆ “ಶ್ರೀ ಮಾತಾ ಮಾಣಿಕ್ಯ ಸೇವಾ ರತ್ನ-2026” ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿ ಶ್ರೀನಿವಾಸ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ವಿಶೇಷ ಆಹ್ವಾನಿತರಾಗಿ “ಶ್ರೀ ಮಾತಾ ಮಂಜಮ್ಮ ಜೋಗತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು” ಮರಿಯಮ್ಮನಹಳ್ಳಿ ಹಾಗೂ ಶ್ರೀಮತಿ ಆರತಿ ಕೆ ಟಿ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥಾಪಕರು ಹೊಸಪೇಟೆ. ಹಾಗೂ ಇನ್ನೂ ಅನೇಕ ಗಣ್ಯಮಾನ್ಯರು ಆಗಮಿಸುತ್ತಾರೆ.*

*ಈ ಒಂದು ಕಾರ್ಯಕ್ರಮಕ್ಕೆ “ಅರಿವು ಮತ್ತು ಜನಜಾಗೃತಿ ಕಾರ್ಯಕ್ರಮ”ವನ್ನು ರಂಗಲೋಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮಸಾರಿ ನೆಲ್ಕುದುರಿ, “ಮಹಾಂತೇಶ್ ಹಾಗೂ ತಂಡ”ದವರು ನಡೆಸಿಕೊಡುತ್ತಾರೆ.*

*”2026 ರ ಪ್ರಶಸ್ತಿ”ಗೆ ಆಯ್ಕೆಯಾದವರು.*

*1)ಶ್ರೀಯುತ ಮಲ್ಲೇಶ್ ದೊಡ್ಡ ಮನಿ ಡಿವೈಎಸ್ಪಿ ಉಪ ವಿಭಾಗ ಕೂಡ್ಲಿಗಿ.*

*2) ಶ್ರೀಮತಿ ವಿಶಾಲಾಕ್ಷಿ ವಕೀಲರು ಹಗರಿಬೊಮ್ಮನಹಳ್ಳಿ.*

*3) ಶ್ರೀಯುತ ವಿ ಎನ್ ಜವಾಯಿ ನಿವೃತ್ತ ದೈಹಿಕ ಶಿಕ್ಷಕರು ಶ್ರೀ ಚಂದ್ರಮೌಳೇಶ್ವರ ಪ್ರೌಢಶಾಲೆ ಹಂಪಾಪಟ್ಟಣ.*

*4)ಶ್ರೀಯುತ ಗಂಗಾಧರಯ್ಯ ಎಸ್ಎಂ ಮಾಲೀಕರು ದರ್ಶನ್ ಹೋಟೆಲ್ ಹಗರಿಬೊಮ್ಮನಹಳ್ಳಿ.*

*5) ಶ್ರೀಯುತ ಹೆಚ್ ಹನುಮಂತಪ್ಪ ಗ್ರಾಮ ಸಹಾಯಕ ಪಿಂಜಾರ್ ಹೆಗ್ಡಾಳ್.*

*6) ಶ್ರೀಮತಿ ಇಟಗಿ ಶಿವಮ್ಮ ಹಗರಿಕ್ಯಾದಿಗೆಹಳ್ಳಿ.*

*7) ಶ್ರೀಯುತ ಸಪ್ತಗಿರಿರಂಗ ಕೂಡ್ಲಿಗಿ.*

*8) ಶ್ರೀಯುತ ಸತೀಶ್ ಪಾಟೀಲ್ ಹಗರಿಬೊಮ್ಮನಹಳ್ಳಿ.*

*9) ಶ್ರೀಮತಿ ಹೆಚ್ ದೊಡ್ಡ ಬಸ್ಸಮ್ಮ ಸಮುದಾಯ ಆರೋಗ್ಯ ಇಲಾಖೆ ಹಂಪಾಪಟ್ಟಣ.*

*10) ಶ್ರೀಮತಿ ರೇಣುಕಮ್ಮMA(PHD) ಪದವೀಧರೆ ಚೌಡಕಿ ಪದಗಳ ಹಾಡುಗಾರಿಕೆ ಹೊಸಪೇಟೆ.*

*ಈ ರೀತಿಯಾಗಿ ಸನ್ಮಾನಿತರನ್ನು ಗುರುತಿಸಿದ್ದು ಇದೇ ಭಾನುವಾರ ದಿವಸ ಬೆಳಿಗ್ಗೆ 10.30 ಕ್ಕೆ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸನ್ಮಾನವನ್ನು ಸ್ವೀಕರಿಸುತ್ತಿದ್ದಾರೆ.*

*ಈ ಒಂದು ಕಾರ್ಯಕ್ರಮಕ್ಕೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ*