ಜೂಡಿ ನ್ಯೂಸ್ :
ಕೊಪ್ಪಳ: ಸಾಣಾಪೂರ ಬಳಿ ಕಳೆದ ವರ್ಷ ನಡೆದ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ವ್ಯಕ್ತಿಯೊರ್ವನ ಕೊಲೆ ಪ್ರಕರಣ ಸಣ್ಣ ಘಟನೆ ಎಂದಿರುವ ಸಂಸದ ರಾಜಶೇಖರ ಹಿಟ್ನಾಳ್ ಹೇಳಿಕೆ ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾಟವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, ಸಾಂವಿಧಾನಿಕ ಹುದ್ದೆಯಲ್ಲಿರುವ ಸಂಸದ ಹಿಟ್ನಾಳ್ ಅವರಿಗೆ ಇಂತಹ ಹೇಳಿಕೆ ಶೋಭೆ ತರುವಂತಹದ್ದಲ್ಲ. ಪ್ರವಾಸೋದ್ಯಮ ಉತ್ತೇಜನ ನೀಡುವ ಭಾಗವಾಗಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿAದ ಆಯೋಜಿಸಿದ್ದ ಕೊಪ್ಪಳ ಅನ್ವೇಷಿಸಿ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಕಡೆಯಿಂದ ಬಂದಿದ್ದ ಬ್ಲಾಗರ್ಸ್, ಪ್ರವಾಸಿ ಮಿತ್ರರ ಎದುರು ಹಿಟ್ನಾಳ್ ಅವರು, ಇಂತಹ ಅಸಂಬದ್ಧ ಹೇಳಿಕೆ ನೀಡಿ, ನಮ್ಮ ಜಿಲ್ಲೆಯ ಮಾನ- ಮಾರ್ಯದೆ ತೆಗೆದಿದ್ದಾರೆ.ಆನೆಗೊಂದಿ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯಲು ಆಡಳಿತ ಪಕ್ಷದಲ್ಲಿರುವ ಜನಪ್ರತಿನಿಧಿಗಳ ಹಿಂದೆ ಇರುವ ಹಲವು ಬೆಂಬಿಲಗರೇ ಕಾರಣ.
ಡ್ರಗ್ಸ್, ಮಟ್ಕಾ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ನಿರಂತಾAಕವಾಗಿ ನಡೆಯಲು ಬಿಟ್ಟಿರುವುದೇ ಇಂತಹ ಘಟನೆ ಜರುಗಲು ಕಾರಣ ಎಂಬುದು ಜಗಜ್ಜಾಹೀರು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ, ಪೊಲೀಸಿಂಗ ಬೀಟ್ ವ್ಯವಸ್ಥೆ ಜಾಸ್ತಿ ಮಾಡಿಸಿ, ಬರುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಒದಗಿಸಿದರೇ ಹೆಚ್ಚಿನ ಮಟ್ಟದಲ್ಲಿ ದೇಶವಲ್ಲದೇ ವಿದೇಶಿ ಪ್ರವಾಸಿಗರು ನಮ್ಮ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಲು ಬರುತ್ತಾರೆ.
ಅಲ್ಲದೆ, ಕೇಂದ್ರ ಸರಕಾರವು, ಪ್ರವಾಸಿಗರನ್ನು ಸೆಳೆಯಲು ಕೊಪ್ಪಳ ಅನ್ವೇಷಿಸಿ, ಎನ್ನುವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಇಂತಹ ಕಾರ್ಯಕ್ರಮದಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮಾತನಾಡಬಹುದಾಗಿದ್ದ ಹಿಟ್ನಾಳ್ ಅವರು, ತಮ್ಮ ಬೆಂಬಲಿಗರ ಹಿತ ರಕ್ಷಣೆಗಾಗಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಚಿಕ್ಕ ಘಟನೆ ಎಂದಿರುವುದು ಸರಿಯಲ್ಲ. ಅಲ್ಲದೆ, ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ ಹಾಗೂ ವಿದೇಶಿ ಪ್ರಜೆಯ ಕೊಲೆ ಪ್ರಕರಣದಿಂದ ನಮ್ಮ ಭಾಗಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಅರ್ಧಕರ್ಧ ಇಳಿಕೆಯಾಗಿದೆ.
ಪ್ರತಿ ವರ್ಷ 3೦ ಲಕ್ಷ ಕ್ಕೂ ಹೆಚ್ಚು ಪ್ರವಾಸಿಗರು ಆನೆಗೊಂದಿ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ವಾಡಿಕೆ. ಆದರೆ, ಈ ಘಟನೆಯಾದ ಬಳಿಕ ಶೇ.5೦ ರಷ್ಟು ಪ್ರವಾಸಿಗರ ಸಂಖ್ಯೆ ಬರುವುದು ಇಳಿಕೆಯಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆಲ್ಲಾ ಆಡಳಿತ ಪಕ್ಷದ ಜನಪ್ರತಿನಿಧಿಗಳ ಕಾರ್ಯಕ್ಷಮತೆಯೇ ಕಾರಣ. ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಸಣ್ಣ ಘಟನೆ ಎನ್ನುವ ಮನಸ್ಥಿತಿಯಿಂದ ಹಿಟ್ನಾಳ್ ಇನ್ನಾದರೂ ಹೊರಬರಬೇಕು. ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಕೊಟ್ಟು ಪ್ರವಾಸೋದ್ಯಮ ಉತ್ತೇಜಿಸುವಂತ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕೆಂದು ಕ್ಯಾವಟರ್ ಅವರು ಒತ್ತಾಯಿಸಿದ್ದಾರೆ.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ