ಜೂಡಿ ನ್ಯೂಸ್ :
ಹೊಸಪೇಟೆ- ವಿಜಯನಗರ : ಕನ್ನಡ ನಾಡಿನಲ್ಲಿ ಸಾಹಿತ್ಯ ಉತ್ಕೃಷ್ಟವಾದುದು, ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡುವರೆ ಸಾವಿರ ವರ್ಷಗಳ ಕಾಲ ಇತಿಹಾಸವಿದೆ, ಅದರಂತೆಯೇ ಗಮಕ ಸಾಹಿತ್ಯಕ್ಕೆ ವಿಶೇಷವಾದ ಸ್ಥಾನಮಾನವಿದೆ, ಇಂತಹ ವಿಶೇಷ ಸ್ಥಾನವಿರುವ ಗಮಕ ಸಾಹಿತ್ಯ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಕರ್ನಾಟಕ ಗಮಕಲಾ ಪರಿಷತ್ತು ವಿಜಯನಗರ ಜಿಲ್ಲಾ ಘಟಕದ ಕಾರ್ಯ ಶ್ಲಾಘನೀಯವಾದದ್ದು. ಎಂದು ಕುಮಾರವ್ಯಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಲ್ಲಿಕಾರ್ಜುನ ಗೌಡ ಮಾತನಾಡಿದರು.
ಕರ್ನಾಟಕ ಗಮಕಲಾ ಪರಿಷತ್, ಶ್ರೀ ವಾಗ್ದೇವಿ ಗಮಕಲ ಪ್ರತಿಷ್ಠಾನ ಬೆಂಗಳೂರು, ಜಿಲ್ಲಾ ಘಟಕ ವಿಜಯನಗರ, ಕನ್ನಡ ಸಾಹಿತ್ಯ ಪರಿಷತ್ ಹೊಸಪೇಟೆ ಇವರ ಸಹಯೋಗದಲ್ಲಿ ಕುಮಾರವ್ಯಾಸ ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ಕವಿ ಕಾವ್ಯ ಪರಿಚಯ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶ್ರೀಯುತ ಮಲ್ಲಿಕಾರ್ಜುನ ಗೌಡ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ವಿಜಯನಗರ ಜಿಲ್ಲಾ ಘಟಕ. ಶ್ರೀಯುತರು ಉದ್ಘಾಟನೆ ಮಾಡಿ ಉದ್ಘಾಟನೆ ನುಡಿಗಳ ನಾಡಿದರು.
ಕರ್ನಾಟಕ ಗಮಕ ಕಲಾ ಪರಿಷತ್ತಿನ ವಿಜಯನಗರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪಲ್ಲವಿ ಆರ್ ಭಟ್ ರವರು ಗಮಕ ಸಾಹಿತ್ಯವು ಕನ್ನಡ ನಾಡಿನಲ್ಲಿ ವಿಶೇಷವಾದ ಸಾಹಿತ್ಯವಾಗಿದೆ ಕವಿ ಚಕ್ರವರ್ತಿ ಕುಮಾರವ್ಯಾಸನಿಂದ ಗಮಕ ಸಾಹಿತ್ಯವು ಅತ್ಯಂತ ಅದ್ಭುತ ಸಾಹಿತ್ಯವಾಗಿದೆ.. ಇಂತಹ ಸಾಹಿತ್ಯ ಉಳಿಯಲು ಬೆಳೆಯಲು ಮುಂದಿನಗೆ ಪೀಳಿಗೆಗೆ ತಿಳಿಸಲು ಗಮಕ ಪರಿಷತ್ತು ಸದಾ ಕಾಲ ಕ್ರಿಯಾಶೀಲವಾಗಿದ್ದು… ಗಮಕ ಸಾಹಿತ್ಯ ವಿಶೇಷವಾಗಿ ಯುವಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತದೆ, ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕವಿ ಕಾವ್ಯ ಪರಿಚಯ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಗಮಕ ಸಾಹಿತ್ಯದ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಆಶಯ ನುಡಿಗಳ ನಾಡಿದರು..
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ವಿಜಯನಗರ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನಗೌಡ, ನಿರ್ದೇಶಕಮಾರ್ಗದಪ್ಪ ಕೆ, ವಿಶ್ವನಾಥ ಡಿ, ಕಡ್ಲಿ ವೀರಭದ್ರೇಶ, ಬಸವರಾಜ್ ಕೆ, ಹಾಗೂ ಸುಧಾ ದೇವಿ ಅವರನ್ನು ಗಮಕಲಾ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನಿತರ ಪರವಾಗಿ ಬಸವರಾಜ್ ಕೆ ರವರು ಮಾತನಾಡಿ ಕನ್ನಡ ನಾಡು ಅತ್ಯಂತ ವಿಶೇಷವಾದ ಪುಣ್ಯ ಭೂಮಿಯಾಗಿದೆ.. ಈ ಪುಣ್ಯಭೂಮಿಯಲ್ಲಿ ಜನಿಸಿದ ನಾವೇ ಪುಣ್ಯವಂತರು.. ಆದ್ದರಿಂದ ಯುವ ಸಮುದಾಯ ಕನ್ನಡ ಸಾಹಿತ್ಯ ಕನ್ನಡ ನೆಲ ನುಡಿಗಾಗಿ ಸದಾ ಕಾಲ ಜಾಗೃತರಾಗಿದ್ದು, ಕನ್ನಡ ನೆಲದ ಇತಿಹಾಸವನ್ನು ಅರಿತು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರಕಾಶ್ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಭಾಷಣ ಸ್ಪರ್ಧೆಯ ತೀರ್ಪುಗಾರರಾದ ಡಾ.ಉಷಾರಾಣಿ, ಶಿವಾನಂದ ಗೌಡ, ಗಮಕ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಜಿಲ್ಲಾ ಗಮಕಲಾಪರಿಷತ್ತಿನ ಅಧ್ಯಕ್ಷರಾದ ಡಾ. ಫಕೀರಪ್ಪ ವಜ್ರಬಂಡಿ ಮಾತನಾಡಿ, ವಿಜಯನಗರ ಜಿಲ್ಲಾಮಟ್ಟದಲ್ಲಿ ಗಮಕ ಸಾಹಿತ್ಯ ಸಮ್ಮೇಳನ ಮಾಡುವ ಸಂಕಲ್ಪ ಪರಿಷತ್ತಿನಾಗಿದ್ದು ಆದ್ದರಿಂದ ವಿಜಯನಗರ ಜಿಲ್ಲಾ ಎಲ್ಲಾ ಸಾಧಕರು, ಸಾಹಿತ್ಯ ಅಭಿಮಾನಿಗಳು ಈ ಸಂಕಲ್ಪಕ್ಕೆ ಕೈಜೋಡಿಸಿ, ಗಮಕ ಸಾಹಿತ್ಯ ಸಮ್ಮೇಳನ ಮಾಡಲು ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿ.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಘಟಕದ ಗಮಕಲಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರಾದ ಕೆ ಪಲ್ಲವಿ ಆರ್ ಭಟ್ ಹಾಗೂ ವೀರಮ್ಮ ಹಿರೇಮಠ ಅವರಿಗೆ ಸನ್ಮಾನಿಸಲಾಯಿತು,
ಅಜಿಮ್ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್ ಸೇರಿದಂತೆ ವಿಜಯನಗರ ಜಿಲ್ಲಾಮಟ್ಟದ ಎಲ್ಲಾ ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾಷಣಸ್ಪರ್ಧಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳು.
ಪದವಿಪೂರ್ವ ವಿಭಾಗ..ಪ್ರಥಮ ಸ್ಥಾನವಾಣಿಶ್ರೀ, ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜು ಮರಿಯಮ್ಮನಹಳ್ಳಿ.
ದ್ವಿತೀಯ ಸ್ಥಾನ ಕಾಮಾಕ್ಷಿ ಥಿಯೋಸಾಫಿಕಲ್ ಕಾಲೇಜ್ ಹೊಸಪೇಟೆ.
ತೃತೀಯ ಬಹುಮಾನ ಬಿ,ರುಕ್ಸನ್ ಪ್ರಿಯದರ್ಶಿನಿ ಕಾಲೇಜು ಮರಿಯಮ್ಮನಹಳ್ಳಿ.
ಪದವಿ ವಿಭಾಗ ಮೊದಲ ಸ್ಥಾನ ನಾಗರಾಜ್ ಗಂಟಿ, ಎಸ್ ಬಿ ಬಿ ಎಂ ಬಿ ಎಡ್ ಶಿಕ್ಷಣ ಮಹಾವಿದ್ಯಾಲಯ ಹೊಸಪೇಟೆ
ದ್ವಿತೀಯ ಸ್ಥಾನ ಎಚ್ ಮಾಯ, ಪ್ರಿಯದರ್ಶನಿ ಕಾಲೇಜ್ ಮರಿಯಮ್ಮನಹಳ್ಳಿ.
ತೃತೀಯ ಸ್ಥಾನ. ಮಂಜುಳಾ ಎನ್. ಎಸ್ ಬಿಬಿಎಂ ಬಿಎಡ್ ಕಾಲೇಜ್. ಹೊಸಪೇಟೆ.
ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಪುಸ್ತಕ ನೀಡಿ ಗೌರವಿಸಲಾಯಿತು.
ಸಮರೋಪ ಸಮಾರಂಭದಲ್ಲಿ ಸಾಹಿತಿ ಉಮಾ ಮಹೇಶ್ವರ್ ಮಾತನಾಡಿದರು, ಪ್ರಿಯದರ್ಶಿನಿ ಕಾಲೇಜಿನ ಉಪನ್ಯಾಸಕರು, ಹೊಸಪೇಟೆ ವಿವಿಧ ಕಾಲೇಜು ಉಪನ್ಯಾಸಕರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ವಿತರಿದರು.
ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ ಆಯ್ಕೆಯಾದ ವಿದ್ಯಾರ್ಥಿಗಳು ಜನವರಿ 12ರಂದು ನಡೆಯುವ ಕುಮಾರವ್ಯಾಸ ಜಯಂತಿ ಪ್ರಯುಕ್ತ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಪರಿಷತ್ತಿನ ಅಧ್ಯಕ್ಷರಾದ ಪಲ್ಲವಿ ಆರ್ ಭಟ್ ರವರು ತಿಳಿಸಿದರು.
ಕರ್ನಾಟಕ ಗಮಕಲಾ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಪಲ್ಲವಿ ಆರ್. ಭಟ್ ಸ್ವಾಗತಿಸಿದರು ವೀರಮ್ಮ ಹಿರೇಮಠ್ ನಿರೂಪಿಸಿ ವಂದಿಸಿದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ