July 13, 2025

ಪ್ರಿಯದರ್ಶನ ಕಾಲೇಜು ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ, ಹರ್ಷ

ಜೂಡಿ ನ್ಯೂಸ್ :

ಮರಿಯಮ್ಮನಹಳ್ಳಿ: ಪಟ್ಟಣದ ಪ್ರಿಯದರ್ಶಿನಿ ಸ್ವತಂತ್ರಪದವಿ ಪೂರ್ವಕಾಲೇಜು ಹಾಗು ಪ್ರಿಯದರ್ಶಿನಿ ಮಹಿಳಾಪದವಿ ಕಾಲೇಜಿನ ವಿಧ್ಯಾರ್ಥಿನೀಯರು,ಇತ್ತೀಚಿಗೆ ಹೊಸಪೇಟೆಯಲ್ಲಿ ಶ್ರೀವಾಗ್ದೇವಿ ಗಮಕಕಲಾ ಪ್ರತಿಷ್ಟಾನನಿಂದ,ಕುಮಾರವ್ಯಾಸ ಜಯಂತಿ ನಿಮಿತ್ತ ನಡೆಸಿದ ಜಿಲ್ಲಾಮಟ್ಟದ ಕವಿಕಾವ್ಯಪರಿಚಯ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಪ.ಪೂ.ಕಾಲೇಜಿನ ಪ್ರಾಚಾರ್ಯ ಎಂ.ಅಶೋಕ ತಿಳಿಸಿದರು.

ಪದವಿಪೂರ್ವ ವಿಭಾಗದ ಎಸ್.ವಾಣೀಶ್ರೀ ದ್ವಿತಿಯಸ್ಥಾನ,ಬಿ.ರುಕ್ಸಾನ ತೃತಿಯಸ್ಥಾನ,ಪದವಿಕಾಲೇಜಿನ ಹೆಚ್.ಮಾಯಾ,ದ್ವಿತಿಯಸ್ಥಾನ,ಎಲ್.ಲಕ್ಷ್ಮಿ ಸಮಾಧಾನಕರ ಬಹುಮಾನಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು‌ ತಿಳಿಸಿದರು.

ಈಸಂಧರ್ಭದಲ್ಲಿ ಪದವಿಕಾಲೇಜಿನ ಪ್ರಾಚಾರ್ಯ ಪಕ್ಕೀರಪ್ಪ,ಉಪನ್ಯಾಸಕರಾದ ಸೋಮಣ್ಣ,ರಾಮಚಂದ್ರಪೂಜಾರ,ಪರಶುರಾಮ ಉಪಸ್ಥಿತರಿದ್ದರು.