July 13, 2025

ಜವಾಹರ ಬಾಲ್ ಮಂಚ್ ನ ರಾಜ್ಯ ಸಂಚಾಲಕರಾಗಿ ಗಾಳೆಪ್ಪ ಹಿಟ್ನಾಳ್ ನೇಮಕ 

ಜೂಡಿ ನ್ಯೂಸ್ :

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಜವಾಹರ ಬಾಲ್   ಮಂಚ್  ನ ರಾಜ್ಯ ಸಂಚಾಲಕರನ್ನಾಗಿ ಕೊಪ್ಪಳ ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡ ಹಾಗೂ ಹಿಟ್ನಾಳ್ ಕುಟುಂಬದ ಆಪ್ತರಲ್ಲೊಬ್ಬರಾದ ಗಾಳೆಪ್ಪ ಹಿಟ್ನಾಳ್ ಇವರನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಆದೇಶದ ಮೇರೆಗೆ ರಾಜ್ಯ ಅಧ್ಯಕ್ಷರು ನೇಮಕ ಮಾಡಿ ಆದೇಶ ಮಾಡಿದ್ದಾರೆ…

ಈ ನೇಮಕವನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳ ಮುಖಂಡರು ಹಾಗೂ ದಲಿತ ಸಮುದಾಯದ ಎಲ್ಲಾ ಮುಖಂಡರು ಆಪ್ತರು ಸ್ವಾಗತ ಮಾಡಿದ್ದು ಇವರ ಅವಧಿಯಲ್ಲಿ ಪಕ್ಷ ಸಂಘಟನೆ ಇನ್ನಷ್ಟು ಬೆಳೆಯಲಿ ಎಂದು ಯುವ ಕಾಂಗ್ರೆಸ್ ಮುಖಂಡ ಹಾಗೂ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್ ಅವರು ಹಾರೈಸಿದ್ದಾರೆ.