September 14, 2025

ಯಲಬುರ್ಗಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

Judi Newe:

ಯಲಬುರ್ಗಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

 ಕೊಪ್ಪಳ ::ಜಿಲ್ಲೆಯ ಯಲಬುರ್ಗಾ ಉಪ ನೋಂದಣಧಿಕಾರಿ ಯಾಸೀನ್ ಮುಲ್ಲಾ ರಿಂದ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಜನತೆ, ರೈತರು ಪ್ರತಿದಿನ ನೋಂದಣಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಇಲ್ಲಿ ಭ್ರಷ್ಟಾಚಾರ ವಿಫರೀತವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಆಫೀಸ್ ಸಹಾಯಕ ಅರುಣ್ ಎನ್ನುವ ಮಧ್ಯವರ್ತಿಯಿಂದ ಹಣ ವಸುಲ್ ಮಾಡುತ್ತಿರುವುದು ಆಫೀಸಿನ ಪ್ರತಿಯೊಂದು ಟೇಬಲ್ ಗೆ ಗೊತ್ತಿರೋ ವಿಷಯ.

ಪಟ್ಟಣದಲ್ಲಿರುವ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ.ಉಪ ನೋಂದಣಧಿಕಾರಿ ಯಾಸೀನ್ ಮುಲ್ಲಾರ ಕುಮ್ಮಕ್ಕಿನಿಂದ ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸಗಳು ಇಲ್ಲಿ ನಡೆಯುವುದಿಲ್ಲ, ಗ್ರಾಮೀಣ ಜನರನ್ನು ಶೋಷಿಸುತ್ತಿರುವ ಬಗ್ಗೆ ಹಲವಾರು ದೂರುಗಳಿವೆ.

ನಿಗದಿತ ಸ್ಟಾಂಪ್ ವ್ಯಾಲ್ಯೂಗಿಂತ ನಾಲ್ಕು ಪಟ್ಟು ಹಣ ಜನರಿಂದ ಪೀಕಲಾಗುತ್ತಿದೆ.

ತಾಂತ್ರಿಕ ದೋಷದ ನೆಪವೊಡ್ಡಿ‌ ಹಣಕ್ಕಾಗಿ ತಿಂಗಳಾನುಗಟ್ಟಲೆ ರೈತರನ್ನು ಅಲೆದಾಡಿಸಲಾಗುತ್ತಿದೆ, ಹಣ ಕೊಟ್ಟರೆ ಮಾತ್ರ ಆ ದಿನವೇ ನೋಂದಣಿಗೆ ಅವಕಾಶ ನೀಡುತ್ತಿರುವುದು ಸೋಜಿಗ ಎನಿಸುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇಂಥ ಅಧಿಕಾರಿಗಳ ವಿರುದ್ಧ ಆಯುಕ್ತರಾದ ದಯಾನಂದ ಅಪ್ಪಾಜಿಗೌಡರು ಕ್ರಮ ಜರುಗಿಸುವರೇ, ಕಾದು ನೋಡಬೇಕಾಗಿದೆ.