ಜೂಡಿ ನ್ಯೂಸ್ :
ಪ್ರಾಮಾಣಿಕ ಸೇವೆಯಿಂದ ಜನ ಮನ್ನಣೆ ಗಳಿಸಲು ಸಾಧ್ಯ:ಸಿಸ್ಟರ್ ವಿನೋದರವರ ಅಭಿಮತ
ಹಂಪಾಪಟ್ಟಣ :ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಮೇ, 12 ರಂದು ಶ್ರೀ ಮಾತಾ ಸೇವಾ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯ ಪ್ರಯುಕ್ತ ಮಗಿಮಾವಿನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿನೋದ ಸಿಸ್ಟರ್ ರವರು ಸನ್ಮಾನವನ್ನು ಸ್ವೀಕರಿಸಿ ಅಭಿನಂದನ ನುಡಿಗಳನಾಡಿದರು..
ನಮ್ಮ ಕೆಲಸವನ್ನು ಕಾಯಾ ವಾಚ ಮನಸ್ಸಿನಿಂದ ಮಾಡಿದರೆ ದೇವರ ಕೃಪೆಗೆ ಮುಖ್ಯವಾಗಿ ಜನರ ಪ್ರೀತಿ ಗಳಿಸಲು ಸಾಧ್ಯವಾಗುತ್ತದೆ ಆದ್ದರಿಂದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯ ಪ್ರಯುಕ್ತ ನಮ್ಮನ್ನು ಗುರುತಿಸಿ.. ನಮ್ಮ ಸೇವೆಗೆ ಆತ್ಮ ಬಲವನ್ನು ತುಂಬಿ ಗೌರವಿಸಿದ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿ ಶ್ರೀನಿವಾಸ್ ಅಣ್ಣನವರಿಗೆ ತುಂಬು ಹೃದಯದ ಅಭಿನಂದನೆಗಳು, ಸನ್ಮಾನವನ್ನು ಸ್ವೀಕರಿಸಿ ಅಭಿನಂದನೆ ನುಡಿಗಳನಾಡಿದರು…
ಪ್ರಾಸ್ತಾವಿಕ ನುಡಿಗಳನಾಡಿದ ಮಾತಾ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಜಿ ಶ್ರೀನಿವಾಸ್ ರವರು ದಾದಿಯವರ ಸೇವೆ ಅತ್ಯಂತ ಸ್ಮರಣೀಯವಾದದ್ದು. ಮಹಾಮಾನತಾವಾದಿ, ಅಂತರಾಷ್ಟ್ರೀಯ ನರ್ಸಿಂಗ್ ಕಾಲೇಜಿನ ಮೊದಲ ಸಂಸ್ಥಾಪಕಿ
ಆಧುನಿಕ ಶುಶ್ರೂಷೆಯ ಸಂಸ್ಥಾಪಕ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ಮೇ 12 ಅನ್ನು ಅಂತರಾಷ್ಟ್ರೀಯ ದಾರಿಯರ ದಿನಾಚರಣೆಯಂದು ಆಚರಿಸಲಾಗುತ್ತದೆ, ಈ ದಿನದ ಪ್ರಯುಕ್ತ ನಮ್ಮ ಮಗಿಮಾವಿನಹಳ್ಳಿ ಆಸ್ಪತ್ರೆಯ 20 ವರ್ಷಗಳಿಂದ ನರ್ಸಿಂಗ್ ನಲ್ಲಿ ಸೇವೆ ಸಲ್ಲಿಸುತ್ತಿರುವ ವಿನೋದ ಸಿಸ್ಟರ್ ಅವರಿಗೆ ಸತ್ಕರಿಸಿ ಗೌರವಿಸುವ ಭಾಗ್ಯ ನಮ್ಮದಾಗಿದೆ, ನರ್ಸಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ದಾದಿಯರು ವೈದ್ಯರು ಹೇಳುವ ಎಲ್ಲಾ ನಿರ್ದೇಶ ಗಳನ್ನು ಪಾಲಿಸಿ, ಅನಾರೋಗ್ಯ, ವಿವಿಧ ಅಪಘಾತಗಳು ಒಳಗಾದ ರೋಗಿಗಳ ಆರೈಕೆ ಮಾಡುವಲ್ಲಿ ದಾದಿಯರ ಪಾತ್ರ ಶ್ಲಾಘನೀಯ.. ಆರೋಗ್ಯಕರ ಸಮಾಜ ಕಟ್ಟುವಲ್ಲಿ ದಾದಿಯರ ಸೇವೆ ಅತ್ಯಂತ ಮಹತ್ತರವಾದದ್ದು ಎಂದು ಪ್ರಾಸ್ತಾವಿಕ ನುಡಿಗಳ ನಾಡಿದರು…
ವಿಶ್ವ ದಾದಿಯರ ದಿನಾಚರಣೆಯ ಕಾರ್ಯಕ್ರಮವನ್ನು ಹಂಪಾಪಟ್ಟಣ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಉಪ್ಪಾರ್ ಹುಲಿಗೆಮ್ಮ ಕಾಳಪ್ಪನವರು ಕಾರ್ಯಕ್ರಮವು ಉದ್ಘಾಟಿಸಿದರು..
ಇದೇ ಸಂದರ್ಭದಲ್ಲಿ ಗ್ರಾಮದ ಬಂಟರ ಕುಬೇರ ಉಮಾ ಅವರ ಸುಪುತ್ರಿ ಪೂರ್ಣಿಮಾ ರವರು ಬಳ್ಳಾರಿಯ ಬೆಸ್ಟ್ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇಕಡ 88 ರಷ್ಟು ಅಂಕ ಗಳಿಸಿದ ಪೂರ್ಣಿಮಾ ರವರಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು..
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಜಯನಗರ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾದ ಶ್ರೀ ಬಂಟ್ರು ಕುಬೇರ ರವರು ದಾದಿಯರ ಸೇವೆ ಸರ್ವರಿಗೂ ಪ್ರೇರಣದಾಯಕವಾದದ್ದು, ಅವರ ನಿಸ್ವಾರ್ಥ ಸೇವೆ ಸಮಾಜಮುಖಿಯಾದದ್ದು, ಇಂತಹ ಸೇವೆ ಸಲ್ಲಿಸುವವರನ್ನು ಗುರುತಿಸಿದ ಮಾತಾ ಸೇವಾ ಟ್ರಸ್ಟ್ ನವರಿಗೆ ಅಭಿನಂದನೆಗಳು ಪ್ರತಿಯೊಬ್ಬ ತಂದೆ ತಾಯಿಗಳು ಸಹ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಮಾತನಾಡಿದರು…
ಇದೇ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಿಗೇನೇಹಳ್ಳಿ ಬಸವರಾಜ್ ರವರು ಗ್ರಾಮದಲ್ಲಿ ಉಪಯುಕ್ತ ಕಾರ್ಯಕ್ರಮ ಮಾಡುತ್ತಿರುವ ಜಿ ಶ್ರೀನಿವಾಸ್ ಅಣ್ಣನವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ತಿಳಿಸಿ ಹೀಗೆ ಹಲವಾರು ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಮಾತನಾಡಿದರು…
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತಾ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಜಿ ಶ್ರೀನಿವಾಸ್ ರವರು ವಹಿಸಿಕೊಂಡಿದ್ದರು,ಇದೇ ಸಂದರ್ಭದಲ್ಲಿ VSSN ಸಂಘದ ನಿರ್ದೇಶಕರಾದ ಗಾಳಿಮ್ಮನವರ ಹುಲಗಪ್ಪನವರು ಮಾತನಾಡಿದರು, ಕಾರ್ಯಕ್ರಮದಲ್ಲಿ. VSSN ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಬಂಟ್ರು ಉಮಾ ಕುಬೇರ ರವರು. VSSN ನಿರ್ದೇಶಕರಾದ ಆರ್ ಖಾಜಾ ಕಾರ್ಮಿಕ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಹಡಗಲಿ ಖಾಜಾ ಹುಸೇನ್ ರವರು, ಮಾರುತಿ ಭಜನಾ ಮಂಡಳಿ ಅಧ್ಯಕ್ಷರಾದ ಶಿವಣ್ಣನವರು, ಮುಖ್ಯ ಗುರುಗಳು ಮಣಿಗಾರ ಉಮೇಶ್, ಕೆ ಎಸ್ ಹುಲುಗಪ್ಪ. ಬಿದ್ದ ಹನುಮಂತಪ್ಪ. ಶ್ರೀನಿವಾಸ್ ಮಡಿವಾಳ. ಆಶಾ ಕಾರ್ಯಕರ್ತ. ದುರ್ಗಮ್ಮ. ಶಿವಕ್ಕ. ಮೇಘನ ಗಂಟಿ. ಜೀವಿತ.ನವೋದಯ ಕೋಚಿಂಗ್ ಸೆಂಟರ್ನ್ ಶಿಕ್ಷಕರಾದ, ಸುರೇಶ್ ಕುಮಾರ್, ಉಮೇಶ್ ಗಂಟಿ, ವಿದ್ಯಾರ್ಥಿಗಳು ಗ್ರಾಮದ ನಾಗರಿಕ ಬಂಧುಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಪ್ರಾರ್ಥನೆಯನ್ನು ಸುಮಾ. ಮತ್ತು ವಿನುತಾ ಸಂಗಡಿಗರು ನೆರವೇರಿಸಿದರು, ಸ್ವಾಗತವನ್ನು ಜನನಿ ಸೇವಾ ಟ್ರಸ್ಟ್ ಅಧ್ಯಕ್ಷರಾಗದ ಕೇಶವಮೂರ್ತಿ, ಕಾರ್ಯಕ್ರಮದ ನಿರೂಪಣೆಯನ್ನು ನಾಗರಾಜ್ ಗಂಟಿ, ವಂದನಾರ್ಪಣೆಯನ್ನು ಜಿ ಪಕೀರಪ್ಪ ನೆರವೇರಿಸಿದರು..
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ