ಜೂಡಿ ನ್ಯೂಸ್ :
ವರದಿ: ನಾಗರಾಜ ಗಂಟೆ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ
ಮೊಹರಂ ಹಬ್ಬದ ಪ್ರಯುಕ್ತ ಕಾರ್ಣಿಕೋತ್ಸವ..”ಮೂಕ ಪ್ರಾಣಿಗಳಿಗೆ ಕುಂದಾಯಿತು ತುಂಬಿದ ಕೊಡ ಮೂರು ಭಾಗವಾಯಿತು ಸಂತೋಷದ ದೀನ್”
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಮೊಹರಂ ಹಬ್ಬದ ಪ್ರಯುಕ್ತ 2025ನೇ ಸಾಲಿನ ಶ್ರೀ ಚೌಡದಾಪುರ ಯಮನೂರು ಸ್ವಾಮಿಯ ಕಾರ್ಣಿಕೋತ್ಸವ *””ಮೂಕ ಪ್ರಾಣಿಗಳಿಗೆ ಕುಂದಾಯಿತು ತುಂಬಿದ ಕೊಡ ಮೂರು ಭಾಗವಾಯಿತು ಸಂತೋಷದ ದೀನ್””* ಎಂದು ಸ್ವಾಮಿಯ ಸೇವಕ ಸಿಡಿ ಕಂಬವನ್ನೇರಿ ಕಾಣಿಕೋತ್ಸವವನ್ನು ನುಡಿದರು…
ಹಂಪಾಪಟ್ಟಣ ಮೋಹರಂ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ವಿಶೇಷವಾಗಿ ಆಚರಿಸುವ ಮೊಹರಂ ಹಬ್ಬವಾಗಿದೆ.. ಇಲ್ಲಿಯ ವಿಶೇಷ ಏನೆಂದರೆ ಹಂಪಾಪಟ್ಟಣ ಗ್ರಾಮದಲ್ಲಿ ಸುಮಾರು 40 ವರ್ಷಗಳ ಗಳಿಂದಲೂ ಮೊಹರಂ ಹಬ್ಬದ ಕತ್ತಲ ರಾತ್ರಿ ಹಬ್ಬದ ದಿನದಂದು ಹಂಪಾಪಟ್ಟಣ ಗ್ರಾಮದ ಚೌಡಾಪುರ ಯಮನೂರ ಸ್ವಾಮಿಯು ಆ ದಿನ ಕೆಂಡವನ್ನು ಆಯ್ದು ಸಿಡಿ ಕಂಬವನ್ನು ಏರಿ ಶಾಂತ ಚಿತ್ತತೆಯಿಂದ ಎಲ್ಲರನ್ನು ಗಮನಿಸಿ ಮೇಲಿನಂತೆ ಮೂರು ಬಾರಿ ಕಾರ್ಣಿಕೋತ್ಸವನ ನುಡಿದು ಕೆಳಗೆ ಬೀಳುತ್ತಾರೆ… ಇದು ಹಂಪಾಪಟ್ಟಣ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಮೊಹರಂ ಹಬ್ಬದ ವಿಶೇಷವಾಗಿದೆ..
ಮೊಹರಂ ಹಬ್ಬದ ಪ್ರಯುಕ್ತ ರಾತ್ರಿಯಿಂದಲೇ ಧಾರ್ಮಿಕ ಕಾರ್ಯಕ್ರಮ ಪ್ರಾರಂಭವಾಗಿ ಮೊದಲು ಸ್ವಾಮಿಯು ಗಂಗೆ ಕಾರ್ಯಕ್ರಮ , ಹಾಗೆ ನೀರಿನಲ್ಲಿ ದೀಪ ಹಚ್ಚುವುದು, ಪಟಾಕ್ಷಿ ಹರಾಜು ಕಾರ್ಯಕ್ರಮ, ಹಾಗೂ ರಿವಾಯತ್ ಪದವನ್ನು ಬಡೇಸಾಬ್ ತಂಡದವರು ಮಧ್ಯರಾತ್ರಿ ಇಂದ ಬೆಳಗಿನ ಜಾವದವರೆಗೆ ರಿವಾಯತ್ ಪದವನ್ನು ಹಾಡಿ ಮೊಹರಂ ಹಬ್ಬಕ್ಕೆ ಮೆರುಗು ತಂದರು
ನಂತರ ಕಾರ್ಣಿಕೋತ್ಸವ, ಕೆಂಡ ಹಾಯುವುದು, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಆಲಾಯ ಕುಣಿತ ಹೀಗೆ ಸ್ವಾಮಿಯ ಮೊಹರಂ ಹಬ್ಬದ ಪ್ರಯುಕ್ತ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿದವು ಈ ಸಂದರ್ಭದಲ್ಲಿ ಹಂಪಾಪಟ್ಟಣ ಗ್ರಾಮದ ಸಮಸ್ತ ನಾಗರಿಕ ಬಂಧುಗಳು.. ಹಂಪಾಪಟ್ಟಣ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು….
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ