September 14, 2025

ಗುರುಪೂರ್ಣಿಮಾ ಕಾರ್ಯಕ್ರಮ ಯಶಸ್ವಿ 

ಜೂಡಿ ನ್ಯೂಸ್ :

 ಗುರುಪೂರ್ಣಿಮಾ ಕಾರ್ಯಕ್ರಮ ಯಶಸ್ವಿ 

 ಕೊಪ್ಪಳ : ಗುರುಪೂರ್ಣಿಮೆ ಅಂಗವಾಗಿ ಏರ್ಪಡಿಸಿದ ಚೈತನ್ಯ ಶಿವಶಕ್ತಿಯರ ಸಂಗಮ ಕಾರ್ಯಕ್ರಮ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಭವನದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಜರುಗಿತು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಧಾರವಾಡ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ತಿಳಿಸುತ್ತಾ ಗುರುವಿನ ಹೆಸರಲ್ಲಿ ಪೂರ್ಣಿಮೆ ಆಚರಿಸುವುದರ ಉದ್ದೇಶವೇನೆಂದರೆ ನಮ್ಮನ್ನು ಪೂರ್ಣ ಮಾಡಬಲ್ಲವನೆ ಗುರು ಮುಕ್ತಿಯನ್ನು ನೀಡಬಲ್ಲವನೇ ಗುರು ಶ್ರೇಷ್ಠ ಗುರಿ ತಲುಪಿಸುವವನೇ ಗುರು ಜಗತ್ತಿನ ಎಲ್ಲಾ ಆತ್ಮಗಳ ಕಲ್ಯಾಣ ಮಾಡುವವನೇ ಗುರು ಸರ್ವರನ್ನು ಬಂಧನ ಮುಕ್ತಗೊಳಿಸುವವನೇ ಗುರು ಎಂದರು.

ಶಿಕ್ಷಕರ ದಿನಾಚರಣೆಯ, ಮಕ್ಕಳ ದಿನಾಚರಣೆ, ಯುವಕರ ದಿನಾಚರಣೆ, ಕಾರ್ಮಿಕರ ದಿನಾಚರಣೆ ಎನ್ನುತ್ತೇವೆ ಆದರೆ ಗುರುಗಳ ಪೂರ್ಣಿಮೆ ಎನ್ನದೆ ಕೇವಲ ಗುರುಪೂರ್ಣಿಮೆ ಎನ್ನಬೇಕಾದರೆ ಅಜ್ಞಾನ ಅಂಧಕಾರ ಹೋಗಲಾಡಿಸುವಂತ ಗುರುವೊಬ್ಬನೇ ಅವನೇ ಜ್ಞಾನ ಸಾಗರ, ಜ್ಞಾನ ಸೂರ್ಯ, ಜ್ಞಾನೇಶ್ವರ, ಜ್ಞಾನದಾತ ಪರಮಾತ್ಮ ಆಗಿದ್ದಾನೆ.

ಪರಮಾತ್ಮ ಈಶ್ವರನೇ ತನ್ನ ವಿಶ್ವ ವಿದ್ಯಾಲಯ ತೆರೆದು ಸತ್ಯ ಜ್ಞಾನದ ಬೆಳಕನ್ನು ನೀಡುತ್ತಿದ್ದಾನೆ. ಧ್ಯಾನಾಮೃತದ ಕಳಶ ಅಕ್ಕಂದಿರ ಕೈಯಲ್ಲಿ ಕೊಟ್ಟು ಶಿವ ಶಕ್ತಿಯರನ್ನ ಮುಂದಿಟ್ಟು ವಿಶ್ವ ಪರಿವರ್ತನೆಯ ಕಾರ್ಯವನ್ನು ಸ್ವಯಂ ಪರಮಾತ್ಮನೇ ಸದ್ಗುರುವಾಗಿ ಕೈಗೆತ್ತಿಕೊಂಡಿದ್ದಾರೆ ಎಂದು ಗುರುಪೂರ್ಣಿಮೆಯ ದಿವ್ಯ ಸಂದೇಶ ನೀಡಿದರು.

ಕರ್ನಾಟಕದ ವಿವಿಧ ಜಿಲ್ಲಾ ತಾಲೂಕುಗಳ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಆಗಮಿಸಿದ ಬ್ರಹ್ಮಕುಮಾರಿ ಸಮರ್ಪಿತ ಅಕ್ಕಂದಿರನ್ನು ವೇದಿಕೆ ಮೇಲೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಾಳಪ್ಪ ಭೂತೆ ನಿವೃತ್ತ ಸಿವಿಲ್ ನ್ಯಾಯಾಧೀಶರು ಮಾತನಾಡುತ್ತಾ ಗುರುವಿಗೆ ಗುಲಾಮನಾಗದ ತನಕ ತೊರೆಯದಣ್ಣ ಮುಕ್ತಿ ಎಂದು ನಮ್ಮ ಹಿರಿಯರು ಹೇಳಿದ್ದಾರೆ ಪರಮ ಸದ್ಗುರು ಪರಮಾತ್ಮನ ಆದೇಶಕ್ಕೆ ನಾವೆಲ್ಲರೂ ಅಜ್ಞಾಕಾರಿಗಳಾಗಿ ನಡೆಯೋಣ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಅವರು ಮಾತನಾಡುತ್ತ ನಗರದ ಅಭಿವೃದ್ಧಿಗೆ ಬಾಹ್ಯ ಶರೀರಕ್ಕೆ ನೀರು, ಗಾಳಿ, ಆಹಾರ ಎಷ್ಟು ಮುಖ್ಯವೋ ಆಂತರಿಕ ಮನಸ್ಸಿಗೆ ಶಾಂತಿ, ನೆಮ್ಮದಿ ಅಷ್ಟೇ ಮುಖ್ಯ ಅದನ್ನು ಪಡೆದುಕೊಳ್ಳಲು ಇಂತಹ ಅಧ್ಯಾತ್ಮ ಸ್ಥಳಕ್ಕೆ ಸಮಯ ಬಿಡುವು ಮಾಡಿಕೊಂಡು ಬರಬೇಕು ಎಂದರು ಇವತ್ತಿನ ಮಾನಸಿಕ ಒತ್ತಡದ ಸಮಯದಲ್ಲಿ ಮನುಷ್ಯ ತನ್ನ ಶರೀರದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ ಒತ್ತಡದಿಂದ ಮುಕ್ತರಾಗಲು ಮೆಡಿಟೇಶನ್ ಒಳ್ಳೆ ಮಾರ್ಗ ಎಂದು ಅಭಿಪ್ರಾಯ ಪಟ್ಟರು

ವೇದಿಕೆ ಮೇಲೆ ಹಿರಿಯ ವಕೀಲರಾದ ವಿ ಎಂ ಭೂಸನೂರಮಠ ರಾಘವೇಂದ್ರ ಪಾನ್ಗಂಟಿ ಉಪಸ್ಥಿತರಿದ್ದರು ಬಿಕೆ ಯೋಗಿನಿ ಸ್ವಾಗತಿಸಿದರು ಬಿಕೆ ರಶ್ಮಿ ಕಾರ್ಯಕ್ರಮ ನಿರೂಪಿಸಿದರು ಬಿಕೆ ಸ್ನೇಹ ವಂದಿಸಿದರು