ಜೂಡಿ ನ್ಯೂಸ್ :
ಶ್ರೀ ಗುರು ಕೊಟ್ಟೂರೇಶ್ವರ ಹೋಟೆಲ್ ನ ದಾವಣಗೆರೆ ಬೆಣ್ಣೆ ದೋಸೆಯ ಸ್ಪೆಷಾಲಿಟಿನೇ ಬೇರೆ…
ಕೊಟ್ಟೂರು ಯಾರಿಗೆ ತಾನೇ ಪರಿಚಯವಿಲ್ಲ ಹೇಳಿ ಸಣ್ಣ ಮಕ್ಕಳ ಬಾಯಲ್ಲಿ ಕೇಳಿದರು ಹೇಳುತ್ತಾರೆ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಊರೇ ಕೊಟ್ಟೂರು ಎನ್ನುತ್ತಾರೆ.
ನಾನು ಸ್ವಲ್ಪ ದಿನದ ಹಿಂದೆ ಆಕಸ್ಮಿಕವಾಗಿ ಕೊಟ್ಟೂರಿಗೆ ಹೋಗಿದ್ದೆ. ಬೆಳಗ್ಗೆ 10:30 ರ ಸಮಯ ಹೊಟ್ಟೆ ಹಸಿವೆ ಬಹಳ ಆಗಿದೆ ಎಂದುಕೊಂಡು ಆಕಸ್ಮಿಕವಾಗಿ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಹತ್ತಿರ ಇರುವ “ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೆ ದೋಸೆ” ಹೋಟೆಲ್ಗೆ ಹೋದೆ. ನಾನು ದೋಸೆ ತಿನ್ನುವುದೇ ಅಪರೂಪ ಅಂತಹದರಲ್ಲಿ ಬೆಣ್ಣೆ ದೋಸೆ ಆರ್ಡರ್ ಮಾಡಿದೆ ಎರಡಕ್ಕೆ 70 ರೂಪಾಯಿ ಎಂದರು ಪರ್ವಾಗಿಲ್ಲ ಕೊಡಿ ಅಂತ ಹೇಳಿ ಆರ್ಡರ್ ಮಾಡಿದೆ.
*ಬೆಣ್ಣೆ ದೋಸೆ ಎಷ್ಟೊಂದು ಸ್ಮೂತ್ ಇತ್ತು ಎಂದರೆ “ಬೆಲ್ಲದ ಸವಿಯನ್ನು ತಿಂದವನೇ ಬಲ್ಲ” ಎನ್ನುವಂತೆ ಬೆಣ್ಣೆ ದೋಸೆಯನ್ನು ತಿಂದು ಅನುಭವಿಸಿದನೇಬಲ್ಲ ಅನ್ನುವಂತೆ ಅಷ್ಟೊಂದು ರುಚಿ ಆಗಿದ್ದವು. ನನ್ನ ಅಣ್ಣ ವೆಂಕಣ್ಣ ನಡುಗುರ್ತಿ ಹಾಗೂ ನನಗೆ ದೋಸೆಯ ಅನುಭವವಾಯಿತು.
*ಆ ಹೋಟೆಲಲ್ಲಿ ಬೆಣ್ಣೆ ದೋಸೆ ಓಪನ್ ದೋಸೆ ಖಾಲಿ ದೋಸೆ ಸೆಟ್ ದೋಸೆ ಮಸಾಲೆ ದೋಸೆ ದೊರೆಯುತ್ತವೆ.
*ಅಂದಹಾಗೆ ಕ್ಯಾಶ್ ಕೌಂಟರ್ ನ ಹತ್ತಿರ ಹೋಗಿ ಓನರ್ ಯಾರು ಎಂದು ವಿಚಾರಿಸಿದಾಗ ನಾಗರಾಜ್ ಎಂದು ಹೇಳಿದನು.
*ಅವರನ್ನು ಕರೆದ ನಾನು ಸಣ್ಣ ಪರಿಚಯ ಮಾಡಿಕೊಂಡೆ ಬೆಣ್ಣೆ ದೋಸೆ ನಾಗರಾಜ್ ಎಂದು ಹೆಸರು ಪಡೆದಿರುವ ಅವರೇ ನಾಗರಾಜ್ ಕುಂಬಾರ್.
ಶ್ರೀಯುತ ವೀರಭದ್ರಪ್ಪ ದೇವಿರಮ್ಮ ಕುಂಬಾರ್ ಇವರ ಏಕೈಕ ಪುತ್ರನೇ ನಾಗರಾಜ್ ಕುಂಬಾರ್ಇ. ಇವರು ಶಿಕ್ಷಣ ಪ್ರೇಮಿ ಹಾಗೂ ಬಿಎ ಪದವೀಧರ ಈತನು ಕವನ ಕಥೆ ಹಾಡು ಎಂದರೆ ಎಲ್ಲಿಲ್ಲದ ಹುಚ್ಚು ಎನ್ನುತ್ತಾರೆ ಅಂದ ಹಾಗೆ ತಮ್ಮ ಕಸುಬಾದ ಮಡಿಕೆ ತಯಾರಿಕೆಯಲ್ಲಿ ತಲ್ಲಿನರಂತೆ ಹಾಗೆ ಜೀವನ ಸಾಗಿಸುತ್ತ 2003ರಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬಿಡುವಿನ ಸಮಯದಲ್ಲಿ ಹೋಟೆಲಿಗೆ ಸೇರಿಕೊಂಡರಂತೆ ಅಲ್ಲಿಯೇ ಕಲಿತ ಬೆಣ್ಣೆ ದೋಸೆ ಕೆಲಸ ತಲೆಯೆತ್ತಿ ನೋಡುವಂತೆ ಮಾಡಿತು ಎನ್ನುತ್ತಾರೆ ನಾಗರಾಜ್ ಕುಂಬಾರ್.
2004ರಲ್ಲಿ ಉಜ್ಜಯಿನಿ ಸರ್ಕಲ್ಲಿನ ಮತ್ತಿಹಳ್ಳಿ ಹೋಟೆಲ್ ಹತ್ತಿರ ಒಂದು ವರ್ಷ ಹೋಟೆಲ್ ಮಾಡಿ ವ್ಯವಹಾರ ಸರಿಯಾಗದ ಕಾರಣ ಬಸ್ ಸ್ಟ್ಯಾಂಡ್ ಹತ್ತಿರ ಬಂದು ನನ್ನ ಹೋಟೆಲ್ ವೃತ್ತಿಯನ್ನು ಪ್ರಾರಂಭ ಮಾಡಿದೆ ಎನ್ನುತ್ತಾರೆ.
ಇವರು ಫಿಲಂ ಇಂಡಸ್ಟ್ರಿಯಲ್ ನಲ್ಲಿ ಸಹಿತ ಆಸಕ್ತಿ ಬಹಳ ಎಂದು ಹೇಳಿದರು ಅವರ ದೊಡ್ಡಮ್ಮನ ಮಗನನ್ನು ಹೋಟೆಲ್ ನಲ್ಲಿ ನೇಮಿಸಿ 2010ರಲ್ಲಿ ಮತ್ತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಕೃಷ್ಣನ್ ಮ್ಯಾರೇಜ್ ಸ್ಟೋರಿ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನೂತನ್ ಉಮೇಶ್ ನಿರ್ದೇಶಕರು ಕೊಟ್ಟೂರು ಇವರ ಹತ್ತಿರ ಇದ್ದೆ ಎನ್ನುತ್ತಾರೆ
ನಾಗರಾಜ್ ಅವರು ಒಟ್ಟಾರೆಯಾಗಿ ಇವರ ಇತಿಹಾಸವನ್ನು ನೋಡಿದರೆ ಒಬ್ಬ ಶ್ರಮಜೀವಿ ನಾಗರಾಜ್ ಎನ್ನಬಹುದು.ನೀವು ಬೆಣ್ಣೆ ದೋಸೆ ತಿನ್ನಬೇಕೆಂದರೆ ಕೊಟ್ಟೂರಿನ ಬಸ್ ಸ್ಟ್ಯಾಂಡ್ ಹತ್ತಿರವಿರುವ ಬೆಣ್ಣೆ ದೋಸೆ ನಾಗರಾಜನ ಹೋಟೆಲ್ ಯಾವುದು ಎಂದು ಕೇಳಿದರೆ ಯಾರಾದರೂ ತೋರಿಸುತ್ತಾರೆ ನೀವು ಒಮ್ಮೆ ಭೇಟಿ ಕೊಡಿ. ಅದರ ರುಚಿಯನ್ನು ಅನುಭವಿಸಿ.
ನಾಗರಾಜ್ ಕುಂಬಾರ್ ಇವರ ಫೋನ್ ನಂಬರ್ 8970397288.
ಪರಿಚಯ ಲೇಖನ : ಜಿ ಶ್ರೀನಿವಾಸ ಹಂಪಾಪಟ್ಟಣ.
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ