September 14, 2025

ಉತ್ತಮ ಸಾಹಿತ್ಯ ರಚನೆಗೆ ಅವರ ಸುತ್ತಲಿನ ಪರಿಸರ ಪ್ರೇರಣೆಯಾಗಿದೆ : ಪ್ರೊ.ಕೆ.ರವೀಂದ್ರನಾಥ

ಜೂಡಿ ನ್ಯೂಸ್ :

 ಉತ್ತಮ ಸಾಹಿತ್ಯ ರಚನೆಗೆ ಅವರ ಸುತ್ತಲಿನ ಪರಿಸರ ಪ್ರೇರಣೆಯಾಗಿದೆ : ಪ್ರೊ.ಕೆ.ರವೀಂದ್ರನಾಥ

ಕೊಪ್ಪಳ : ಸಮಾಜ,ಶಿಕ್ಷ ಣ,ಮನೆತನದ ಮೂಲಕ ಸಾಹಿತ್ಯ ರಚಿಸಿದ ಅರುಣಾ ನರೇಂದ್ರ ಪಾಟೀಲ ಅವರ ಕಾರ್ಯ ಸ್ತುತ್ಯಾರ್ಹ.ಅವರ ಮೇಲೆ ವಚನ, ಕೀರ್ತನೆ,ತತ್ವಪ ದ,ಅನು ಭಾವಿಕ ನೆಲೆಗಳು ಪ್ರಭಾವ ಬೀರಿವೆ.ಉತ್ತಮ ಸಾಹಿತ್ಯ ರಚನೆಗೆ ಅವರ ಪರಿಸರ ಕಾರಣ ಎಂದು ವಿಶ್ರಾಂತ ಪ್ರಾಧ್ಯಾಪಕ,ವಿದ್ವಾಂಸರಾದ ಪ್ರೊ.ಕೆ.ರವೀಂದ್ರನಾಥ ಅಭಿಮತ ವ್ಯಕ್ತಪಡಿಸಿದರು.

ಇತ್ತೀಚೆಗೆ ನಗರದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಸಿದ್ಧಾರ್ಥ ಪ್ರಕಾಶನ ಏರ್ಪಡಿಸಿದ್ದ ಅರುಣಾ ನರೇಂದ್ರ ಅವರ ಎರಡು ಕೃತಿಗಳ ಲೋಕಾರ್ಪಣೆ, ಸನ್ಮಾನ,ಮತ್ತು ಕವಿಗೋಷ್ಠಿ ಸಮಾರಂಭ ದಲ್ಲಿ ಎರಡು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ ಮನುಷ್ಯ ಸಂಬಂಧ ಪ್ರಚಲಿತ,ವಸ್ತು,ವಿಷಯ, ಸಾಮಾಜಿಕ ಚಿಂತನೆಯ ಗಜಲ್ ಮಕ್ಕಳ ಕೃತಿ ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು. ಚಂದಿರನಿಲ್ಲದ ಬಾನಿನಲ್ಲಿ ಗಜಲ್ ಕೃತಿಯಲ್ಲಿನ ಗಜಲ್ ಇವುಗಳಲ್ಲಿ ಸಾಮಾಜಿಕ, ವಿರಹದ ವೇದನೆ,ಪ್ರೀತಿ,ಗಜಲ್ ಮಾಗಿದ ಅನು
ಭವಗಳು ವ್ಯಕ್ತವಾಗಿವೆ ಎಂದು ಗಜಲ್ ಕವಿ ಅಬ್ದುಲ್ ಹೈ ತೋರಣಗಲ್ಲ ನುಡಿ ದರು.

ಕಮಲಿಯ ಕುರಿಮರಿ ಮಕ್ಕಳ ಕವನ ದಲ್ಲಿ ಇಂದಿನ ಪ್ರಚಲಿತ ವಸ್ತು,ವಿಷ ಯದ ವೈವಿಧ್ಯಮಯ ಮಕ್ಕಳ ಕಾವ್ಯ ಪ್ರಾಸ,ಲಯ,ಹಾಡುಗಾರಿಕೆಯ ಮೂಲಕ ಸರಳ,ಭಾಷೆ ಯಿಂದ ಗಮ ನಸೆಳೆಯುವ ಸಂಕಲನವೆಂದು ಡಾ.ಗ ವಿಸಿದ್ಧ ಪ್ಪ ಪಾಟೀಲ ನುಡಿದರು

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಗಜಲ್ ಪ್ರೀತಿ,ಪ್ರೇಮ,ಸಖಿ ಮೂಲಕ ಅಂತ ರಂಗ ಪ್ರವೇಶಿಸುವ ಕಾವ್ಯದ ರಾಣಿ ಎಂದರು. ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ ಸಮಕಾಲೀನ ಸ್ಪಂದ ನೆಯ ಕೃತಿ ಮಹತ್ವ ಎಂದರು.

ಖ್ಯಾತ ಪ್ರಬಂಧಕಾರ ಬೆಂಗಳೂರಿನ ಈರಪ್ಪ ಕಂಬಳಿ ಗಜಲ್‌ ಮತ್ತು ಮಕ್ಕ ಳ ಕಾವ್ಯ ಏಕಕಾಲದಲ್ಲಿ ಪ್ರಖರ ಸಾಹಿ ತಿಗಳಾದ ಅರುಣಾ ಅವರ ಸೃಜನಶೀಲ ಕಾವ್ಯ ಗಮನ ಸೆಳೆಯುವುದು ಅವ ರಿಂದ ಬರವಣಿಗೆ ನಿರೀಕ್ಷೆಯಲ್ಲಿದ್ದೇವೆ ಎ೦ದರು.

ರಾಜಕೀಯ ಧುರೀಣ ಜಗದೀಶ ಸಿಂಗನಾಳ ಸಸಿಗೆ ನೀರೆರೆವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ನಾಥ ಅಗಡಿ,ಗವಿಸಿದ್ದಪ್ಪ ಅಳವಂಡಿ ವೇದಿಕೆ ಮೇಲೆ ಉಪಸ್ಥಿತಿ ಇದ್ದರು.ಕವಯತ್ರಿ ಅರುಣಾ ನರೇಂದ್ರ ಸ್ವಾಗತಿಸಿ- ಪ್ರಾಸ್ತಾವಿಕ ನುಡಿಗಳನ್ನಾಡಿದರು.ಅನ್ನಪೂರ್ಣ ಮನ್ನಾಪೂರ,ಮೈಲಾ ರಪ್ಪ ಬೂದಿ ಹಾಳ,ಪದ್ಮಾ ಜೆ.ಕಬಾಡಿ ಪ್ರಾರ್ಥಿಸಿದರು. ಡಾ.ಪಾ ರ್ವತಿ ಕನಕಗಿರಿ ನಿರೂಪಿಸಿ ಹೊಂದಿಸಿದರು.


ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ :
ಎ.ಎಂ.ಮದರಿ,ಡಾ.ಜಿ.ಬಿ.ಬಿಡನಾಳ,ಎಚ್‌.ಬಿ.ಸರೋಜಮ್ಮ ಶರಣಪ್ಪ ವಡಿಗೇರಿ
ವಿವಿಧ ಸಾಧಕರಿಗೆ ಸನ್ಮಾನ: ಬೀರಪ್ಪ ಅಂಡಗಿ,ಪರಶುರಾಮ ಗರೇಬಾಳ,ಚಂದ್ರಕಲಾ ಇಟಗಿಮಠ ಅವರಿಗೆ ಸನ್ಮಾನಿಸ ಲಾಯಿತು.


ಕವಿಗೋಷ್ಠಿಯಲ್ಲಿ ಸಿಕ೦ದ‌ರ್ ಮೀರ್ ಅಲಿ,ಶಿಲ್ಪಾ ಮ್ಯಾಗೇರಿ,ರುದ್ರಪ್ಪ ಭಂಡಾರಿ ಮಾತನಾಡಿದರು. ನೂ‌ರ್ ಜಹಾನ್,ಮೈಲಾರಪ್ಪ ಬೂದಿಹಾಳ,ಖಾಜಾಬಿ,ನೀಲಮ್ಮ ಅಂಗಡಿ,ಸಿ.ಎಂ.ಚನ್ನಬಸಪ್ಪ, ಪದ್ಮಾ ಜೆ.ಕಬಾಡಿ,ರೇಖಾ ನಾಲ್ವಾಡ,ಅನಸೂಯಾ ಜಾಗೀರದಾರ,ಡಾ.ಮಹಾಂತೇಶ ನೆಲಾಗಣಿ ,ಡಾ.ಕವಿತಾ ಹ್ಯಾಟಿ,ಅನ್ನಪೂರ್ಣ ಪದ್ಮಶಾಲಿ, ಶಿವ ಪ್ರಸಾದ ಹಾದಿಮನಿ,ಬಾಲನಾಗಮ್ಮ, ಮಹಾಂತೇಶ ಬೆರಗಣ್ಣನವರ, ಪುಷ್ಪಲತಾ ಏಳುಬಾವಿ,ಮಂಜುಳಾ ಸ್ಯಾವಿ ಸುಮಂಗಲಾ ಹಂಚಿನಾಳ,ಸೋಮಲಿಂಗಪ್ಪ ಬೆಣ್ಣಿ ,ಸುರೇಶ ಕಂಬಳಿ,ಅನ್ನಪೂರ್ಣ ಮನ್ನಾಪುರ,ವೀರೇಶ ಕುರಿ, ನಿಂಗಮ್ಮ ಪಟ್ಟಣಶೆಟ್ಟಿ, ಎ.ಪಿ.ಅಂಗಡಿ, ಈರಪ್ಪ ಬಿಜಲಿ,ಶಾರದಾ ರಜತಪೂತ,ಗಂಗಾಧರ ಖಾನಾಪುರ, ಹನುಮವ್ವ,ಡಾ.ಪಾರ್ವತಮ್ಮ ಕನಕಗಿರಿ,ಬಸವರಾಜ ಚೌಡ್ತಿ,ಗೀತಾ ಹಂಚಿ,ಶರಣಬಸಪ್ಪ ಬಿಳಿಯಲಿ ,ಕುಬೇರ ಮಜ್ಜಗಿ,ಶಿಲ್ಪ ಗಣಾಚಾರಿ,ಕಸ್ತೂರಬಾಯಿ,ಅನಸೂಯಾ ಮೊದಲಾದವರು ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿದ ಸಾಹಿತಿ ಅಕ್ಟ‌ ಸಿ.ಕಾಲಿಮಿರ್ಚಿ ಸೃಜನಶೀಲ ಕಾವ್ಯ ಧ್ಯಾನಸ್ಥ ಮನಸ್ಸಿನಿಂದ ಕಾವ್ಯ ರಚಿಸಿದರೆ ಕಾವ್ಯ ಕನ್ನಿಕೆ ಒಲಿಯುವಳು ಎಂದರು.ಇಲ್ಲಿಯ ಕವಿಗಳು ವಾಚ್ಯತೆ ಬಿಟ್ಟರೆ ಉಳಿದೆಲ್ಲ ಕಾವ್ಯ ಓದುಗರ ಗಮನಸೆಳೆದಿವೆ ಎಂದರು. ಪವನ ಕಮ್ಮಾರ ನಿರೂಪಿಸಿದರು ಸಂಚಾಲಕ ನರೇಂದ್ರ ಪಾಟೀಲ ವಂದಿಸಿದರು.