July 12, 2025

ಮಲ್ಲಾಪುರ ಸಹಕಾರಿ ಸಂಘದ ಚುನಾವಣೆಯಲ್ಲಿ ಯಾದವ್ ವಕೀಲರು ನೇತೃತ್ವದಲ್ಲಿ ಬಿಜೆಪಿಗೆ ಮೇಲಗೈ

ಗಂಗಾವತಿ: ತಾಲೂಕಿನ ಮಲ್ಲಾಪುರ ಮತ್ತು ಸಂಗಾಪುರ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಚುನಾವಣೆ ದಿನಾಂಕ 22-12-2024 ರಂದು ಜರುಗಿತು. ಒಟ್ಟು 12 ಸದಸ್ಯರ ಆಡಳಿತ ಮಂಡಳಿಗೆ ಮೂರು ಸದಸ್ಯರು ಅವಿರೋಧ ವಾಗಿ ಆಯ್ಕೆಯಾದರು. ಉಳಿದ 9 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಿತು. ಪಂಪಾಪತಿ ಯಾದವ, ಶ್ರೀಮತಿ ಗಂಗಮ್ಮ ಹರಿಜನ, ರಾಮಬಾಬು ಈ ಮೂರು ಸದಸ್ಯರು ಆಯ್ಕೆಯಾಗಿದ್ದಾರೆ. ಉಳಿದ ಒಂಬತ್ತು ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಜನಾದ್ರಿ, ಗೌರೀಶ ಬಾಗೋಡಿ, ರವಿ ಚೈತನ್ಯ ರೆಡ್ಡಿ, ಶರಣಪ್ಪ ಕಲಿಕೇರಿ ನಾಯಕ, ಬಾಬುಸಾಬ, ಶ್ರೀಮತಿ ಜಯಶ್ರೀ ನಾಗರಾಜ ಕಬ್ಬೆರ, ಶ್ರೀಮತಿ ಎಲ್ಲಮ್ಮ ಸಂಗಾಪುರ, ಶ್ರೀಮತಿ ಪಿ. ಹಂಪಮ್ಮ ರಾಮನಗೌಡ ನಾಯಕ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ರಾಮಕೃಷ್ಣ ಬಸವನದುರ್ಗ ಇವರೆಲ್ಲರೂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಜಯಭೇರಿಯಾಗಿದ್ದಾರೆ.

ಈ ಭಾಗದ ಬಿಜೆಪಿಯ ಹಿರಿಯ ಮುಖಂಡರಾದ ಹೆಚ್.ಸಿ.ಯಾದವ್ ವಕೀಲರು, ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಚ್.ಎಂ.ಸಿದ್ದರಾಮಯ್ಯ ಸ್ವಾಮಿ ಇವರು ಈ ಸಹಕಾರಿ ಸೊಸೈಟಿಯ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು, ಜಿದ್ದಿಗೆ ಬಿದ್ದು ಎಲೆಕ್ಷನ್ ಮಾಡಿದ್ದರಿಂದ, ಸಹಕಾರಿ ಸಂಘ ಆಡಳಿತ ಮಂಡಳಿ ಸದಸ್ಯರೆಲ್ಲ ಬಿಜೆಪಿ ಬೆಂಬಲಿತರಾಗಿದ್ದಾರೆ, ಈ ಗೆಲುವಿಗೆ ಪ್ರತಿಯೊಬ್ಬ ಮತದಾರರು ಮತ್ತು ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದ್ದಾರೆ.