ಹಟ್ಟಿ ಚಿನ್ನದ ಗಣಿ:22
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘ ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಸಂವಿಧಾನ ಶಿಲ್ಪಿ ಡಾ!ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ಅಂಗವಾಗಿ ವೇತನಯುಕ್ತ ರಜೆ ಘೋಷಿಸಲು ಸುಮಾರು 6 ವರ್ಷಗಳ ಸುದೀರ್ಘ ಹೋರಾಟವನ್ನ ನಮ್ಮ ಎಸ್ಸಿ ಹಾಗೂ ಎಸ್ ಟಿ ನೌಕರರ ಸಂಘದ ಜಮದಗ್ನಿ ಕೋಠಾ (ಅಧ್ಯಕ್ಷರು) ಹಾಗೂ ಶರಣಗೌಡ ಗುರಿಕಾರ (ಪ್ರಧಾನ ಕಾರ್ಯದರ್ಶಿಗಳು ) ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದ್ಯಸರುಗಳ ನಿರಂತರ ಒಗ್ಗಟಿನ ಕೂಗು,ಆಡಳಿತ ವರ್ಗದೊಂದಿಗೆ ಹಲುವಾರು ಸಭೆಗಳು, ಕರ್ನಾಟಕ ಸರಕಾರದ ಮಾನ್ಯ ಮಂತ್ರಿಗಳಿಗೆ ಖುದ್ದು ಬೇಟೆ ನೀಡಿ ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಮಿಕರಿಗೆ ಪ್ರತಿ ವರ್ಷ ಏಪ್ರಿಲ್ 14 ರಂದು ವೇತನಯುಕ್ತ ರಜೆ ಘೋಷಿಸಲು ಮನವಿ ಸಲ್ಲಿಸಿದ ಪ್ರಯುಕ್ತ ಇಂದು ನಮ್ಮ ಕಾರ್ಮಿಕರ ವೇತನ ಒಪ್ಪಂದದಲ್ಲಿ ಮೊದಲು 13 ರಜೆಗಳು ಇದ್ದವು ಇನ್ನು ಮುಂದೆ 14 ರಜೆಗಳು ನೀಡಲು ಅನುಮೋದನೆ ಸಿಕ್ಕಿದ್ದು ಆ 14 ನೇಯ ರಜೆ ನಮ್ಮ ಬಾಬಾ ಸಾಹೇಬರ ಜಯಂತಿಯ ವೈಶಿಷ್ಟತೆ ಆಗಿರುತ್ತದೆ. ಇದು ನಮ್ಮ ಸಂಘದ ಸತತ ಹೋರಾಟದ ಫಲ ಹಾಗೂ ಎಸ್ಸಿ ಹಾಗೂ ಎಸ್ ಟಿ ನೌಕರರ ಸಂಘದ ಬಲವರ್ಧನೆ, ಇದಕ್ಕೆ ಸಹಕರಿಸಿದ ಎಲ್ಲಾ ಗಣ್ಯ ಮಾನ್ಯರಿಗೆ, ವ್ಯವಸ್ಥಾಪಕ ನಿರ್ದೇಶಕರುಗಳಿಗೆ,ಕಂಪನಿ ಆಡಳಿತ ವರ್ಗದವರಿಗೆ,ಕಾರ್ಮಿಕ ವರ್ಗಕ್ಕೆ ಹಾಗೂ ಮಾಧ್ಯಮ ಮಿತ್ರರಿಗೆ, ಭೀಮ ವಂದನೆಗಳನ್ನು ಸಲ್ಲಿಸಿದರು.
More Stories
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಿರಿಯ ಚೇತನ ಸುಡುಗಾಡು ಸಿದ್ದ ವಿರೂಪಾಕ್ಷಪ್ಪ ಕಲ್ಯಾಣದವರು ಅವರಿಗೆ ಶ್ರದ್ಧಾಂಜಲಿ
Kkk